ಅಧ್ಯಾಯ 9: ರಾಜ ವಿದ್ಯಾ ಯೋಗ - ಶ್ಲೋಕ 27
27
ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್। ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದರ್ಪಣಮ್।। 27।।
ಅನುವಾದ
ಕುಂತಿಪುತ್ರನೇ, ನೀನು ಏನು ಮಾಡುತ್ತೀಯೋ, ಏನನ್ನು ತಿನ್ನುತ್ತೀಯೋ, ಯಾವುದನ್ನು ಯಜ್ಞದಲ್ಲಿ ಅಗ್ನಿಗೆ ಅರ್ಪಿಸುತ್ತೀಯೋ, ಯಾವುದನ್ನು ಕಾಣಿಕೆಯಾಗಿ ಕೊಡುತ್ತೀಯೋ, ಮತ್ತು ಯಾವ ತಪಸ್ಸನ್ನು ಆಚರಿಸುತ್ತೀಯೋ, ಅವುಗಳನ್ನು ನನಗೆ ನೈವೇದ್ಯವಾಗಿ ಮಾಡು.