ಅಧ್ಯಾಯ 9: ರಾಜ ವಿದ್ಯಾ ಯೋಗ - ಶ್ಲೋಕ 20
20
ತ್ರೈವಿದ್ಯಾ ಮಾಂ ಸೋಮಪಾಃ ಪೂತಪಾಪಾ ಯಜ್ಞೈರಿಷ್ಟ್ವಾ ಸ್ವರ್ಗತಿಂ ಪ್ರಾರ್ಥಯಂತೇ। ತೇ ಪುಣ್ಯಮಾಸಾದ್ಯ ಸುರೇಂದ್ರಲೋಕಮ್ ಅಶ್ನಂತಿ ದಿವ್ಯಾನ್ ದಿವಿ ದೇವಭೋಗಾನ್।। 20।।
ಅನುವಾದ
ವೇದಗಳಲ್ಲಿ ಉಲ್ಲೇಖಿಸಲಾದ ಸಕಾಮ ಆಚರಣೆಗಳ ಭಕ್ತರು ಯಜ್ಞ ಯಾಗಗಳನ್ನು ಮಾಡುವ ಮೂಲಕ ನನ್ನನ್ನು ಪೂಜಿಸುತ್ತಾರೆ. ಯಜ್ಞದ ಶೇಷವಾದ ಸೋಮರಸವನ್ನು ಪಾನ ಮಾಡುವುದರಿಂದ ಪಾಪಗಳೆಲ್ಲವೂ ಕಳೆದು, ಶುದ್ಧರಾದವರು ಸ್ವರ್ಗಲೋಕಕ್ಕೆ ಹೋಗಬೇಕೆಂದು ಹಾರೈಸುತ್ತಾರೆ. ಅವರ ಪುಣ್ಯಕಾರ್ಯಗಳ ಫಲವಾಗಿ ಅವರು ಇಂದ್ರನ ಲೋಕಕ್ಕೆ ಹೋಗಿ ದೇವತೆಗಳ ಸಕಲ ಭೋಗಗಳನ್ನು ಅನುಭವಿಸುತ್ತಾರೆ.