ಗೀತಾ ಧ್ಯಾನ - ಶ್ಲೋಕ ಶ್ಲೋಕ 4
ಶ್ಲೋಕ 4
ಸರ್ವೋಪನಿಷದೋ ಗೌ ದೋಗ್ಧಾ ಗೋಪಾಲನನ್ದನಃ
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್
ಅನುವಾದ
ಎಲ್ಲ ಉಪನಿಷತ್ತುಗಳು ಗೋವುಗಳಂತಿವೆ; ಅವನ್ನು ಹಾಲುಹೀರುವ ಗೋಪಾಲನಂದನ ಶ್ರೀಕೃಷ್ಣನು; ಕರು ಅರ್ಜುನನು; ಸಜ್ಜನ-ಜ್ಞಾನಿಗಳು ಆ ಹಾಲಿನ ಭೋಕ್ತರು; ದೋಹಿಸಲ್ಪಡುವ ಮಹತ್ತಾದ ಹಾಲೇ ಗೀತಾಮೃತ.