ಅಧ್ಯಾಯ 12: ಭಕ್ತಿ ಯೋಗ - ಶ್ಲೋಕ 16
16
ಅನಪೇಕ್ಷಃ ಶುಚಿರ್ದಕ್ಷ ಉದಾಸೀನೋ ಗತವ್ಯಥಃ। ಸರ್ವಾರಂಭಪರಿತ್ಯಾಗೀ ಯೋ ಮದ್ಭಕ್ತಃ ಸ ಮೇ ಪ್ರಿಯಃ।। 16।।
ಅನುವಾದ
ಪ್ರಾಪಂಚಿಕ ಲಾಭಗಳಲ್ಲಿ ನಿರಾಸಕ್ತಿಯುಳ್ಳವರು, ಬಾಹ್ಯ ವಿಷಯಗಳಲ್ಲಿ ಪರಿಶುದ್ಧರು, ದಕ್ಷರು, ನಿರ್ಲಿಪ್ತರು, ವಿಘ್ನರಹಿತರು ಮತ್ತು ಎಲ್ಲಾ ವ್ಯವಹಾರಗಳಲ್ಲಿ ನಿಸ್ವಾರ್ಥರಾಗಿರುವ ನನ್ನ ಭಕ್ತರು ನನಗೆ ಬಹಳ ಪ್ರಿಯರು.