ಅಧ್ಯಾಯ 4: ಜ್ಞಾನ, ಕರ್ಮ, ಸಂನ್ಯಾಸ ಯೋಗ - ಶ್ಲೋಕ 24
24
ಬ್ರಹ್ಮಾರ್ಪಣಂ ಬ್ರಹ್ಮ ಹವಿರ್ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್। ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮಸಮಾಧಿನಾ।। 24।।
ಅನುವಾದ
ಸಂಪೂರ್ಣ ಭಗವತ್ಧ್ಯಾಸದಲ್ಲಿ ನಿರತರಾದವರಿಗೆ ಹೋಮ ದ್ರವ್ಯವೇ ಬ್ರಹ್ಮ, ಯಜ್ಞದಲ್ಲಿ ಅರ್ಪಿಸುವ ಸ್ರುವವೇ ಬ್ರಹ್ಮ, ಯಜ್ಞಕರ್ಮವೇ ಬ್ರಹ್ಮ, ಯಜ್ಞ ಅಗ್ನಿಯೂ ಬ್ರಹ್ಮವೇ. ಎಲ್ಲವನ್ನೂ ದೇವರಂತೆ ಕಾಣುವವರಿಗೆ ಸುಲಭವಾಗಿ ಭಗವಂತ ಪ್ರಾಪ್ತಿಯಾಗುತ್ತದೆ.