ಅಧ್ಯಾಯ 2: ಸಾಂಖ್ಯ ಯೋಗ - ಶ್ಲೋಕ 71
71
ವಿಹಾಯ ಕಾಮಾನ್ಯಃ ಸರ್ವಾನ್ಪುಮಾಂಶ್ಚರತಿ ನಿಃಸ್ಪೃಹಃ। ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿಗಚ್ಛತಿ।। 71।।
ಅನುವಾದ
ಯಾರು ಎಲ್ಲ ಲೌಕಿಕ ಆಸೆಗಳನ್ನು ತ್ಯಜಿಸಿ ದುರಾಸೆಯಿಲ್ಲದೆ, ನಾನು/ನನ್ನದು ಎಂಬ ಭಾವವಿಲ್ಲದೆ, ಅಹಂಕಾರವಿಲ್ಲದೆ ಇರುತ್ತಾನೋ ಅಂತಹ ವ್ಯಕ್ತಿಯು ಪರಿಪೂರ್ಣವಾದ ನೆಮ್ಮದಿಯನ್ನು ಪಡೆಯುತ್ತಾನೆ.