ಅಧ್ಯಾಯ 2: ಸಾಂಖ್ಯ ಯೋಗ - ಶ್ಲೋಕ 5
5
ಗುರೂನಹತ್ವಾ ಹಿ ಮಹಾನುಭಾವಾನ್ ಶ್ರೇಯೋ ಭೋಕ್ತುಂ ಭೈಕ್ಷ್ಯಮಪೀಹ ಲೋಕೇ। ಹತ್ವಾರ್ಥಕಾಮಾಂಸ್ತು ಗುರೂನಿಹೈವ ಭುಂಜೀಯ ಭೋಗಾನ್ ರುಧಿರಪ್ರದಿಗ್ಧಾನ್।। 5।।
ಅನುವಾದ
ನನ್ನ ಗುರುಗಳಾದ ಈ ಹಿರಿಯರನ್ನು ಕೊಂದು ಈ ಭೋಗಗಳನ್ನು ಅನುಭವಿಸುವುದಕ್ಕಿಂತ ಭಿಕ್ಷುಕನಾಗಿ ಬದುಕುವುದೇ ಲೇಸು. ನಾವು ಅವರನ್ನು ಕೊಂದರೆ, ನಾವು ಅನುಭವಿಸುವ ಈ ಸಂಪತ್ತು ಮತ್ತು ಸಂತೋಷಗಳು ರಕ್ತದಿಂದ ಕಲುಷಿತವಾಗುತ್ತವೆ.